ಮೆಸೊಪೊಟೇಮಿಯ 2

ಆರ್ಜೆಂಟೀನದಲ್ಲಿ ಪರಾನಾ ಮತ್ತು ಉರುಗ್ವೇ ನದಿಗಳ ನಡುವಣ ಫಲವತ್ತಾದ ಪ್ರದೇಶ.  ವಿಸ್ತೀರ್ಣ ಸು. 1,91,660ಚ.ಕಿಮೀ. ಬೆಟ್ಟಗುಡ್ಡಸಾಲುಗಳು, ನಡುನಡುವೆ ಜವುಗು ಪ್ರದೇಶಗಳು ಹಾಗೂ ಅರಣ್ಯಗಳಿಂದ ಕೂಡಿದ ಈ ಪ್ರದೇಶದ ಸರಾಸರಿ ವಾರ್ಷಿಕ ಮಳೆ ಸು.100-150ಸೆಂ.ಮೀ ಎಂಟ್ರೆರಿಯಾಸ್ ಮತ್ತು ಕಾರಿಯಾಂಟೆಸ್ ಪ್ರಾಂತ್ಯಗಳಿಂದ ಹಾಗೂ ಮಿಸಿಯೋನಸ್ ಪ್ರದೇಶದಿಂದ ಕೂಡಿದ ಇಲ್ಲಿಗೆ ಪೋಲೆಂಡ್, ರಷ್ಯ ಹಾಗೂ ಇತರ ಐರೋಪ್ಯ ದೇಶಗಳಿಂದ ಜನರು ಬಂದು ನೆಲಸಿ ಅನೇಕ ವಸಾಹತುಗಳನ್ನು ಸ್ಥಾಪಿಸಿದ್ದಾರೆ.  ಹುಲ್ಲುಗಾವಲುಗಳು ಹೇರಳವಾಗಿದ್ದು ಅಪಾರ ಸಂಖ್ಯೆಯಲ್ಲಿ ದನಕರುಗಳಿಗೆ ಮೇವನ್ನು ಒದಗಿಸುತ್ತವೆ.  ಕುರಿ ಸಾಕಣೆ ಪ್ರಧಾನ ವೃತ್ತಿ; ಸಾಗಾಣಿಕೆಯೂ ಸುಲಭ ಹಾಗೂ ಅಗ್ಗ.  ಧಾನ್ಯ, ದವಸ, ಕಬ್ಬು, ನೆಲಗಡಲೆ ಮುಂತಾದವು ಇಲ್ಲಿಯ ಮುಖ್ಯ ಬೆಳೆಗಳು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ